ಬ್ರಹ್ಮಾವರದಲ್ಲಿ ಜ. 23ರಿಂದ ಮೂರು ದಿನ ಆಯೋಜಿಸಿದ್ದ ಎಚ್.ಎಂ.ಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ವಿವಾದದಿಂದಾಗಿ ಕೊನೇ ಕ್ಷಣದಲ್ಲಿ ರದ್ದುಗೊಂಡಿದ್ದು, ಈಗ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ತಲಾ ₹5,00,000 ತಕ್ಕ ಒಟ್ಟು ₹20,00,000 ಬಹುಮಾನ ಮೊತ್ತವನ್ನು ನೀಡಲಾಯಿತು.
ಉಡುಪಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಎಚ್.ಎಂ.ಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ತಲಾ ₹5,00,000 ರಷ್ಟು ಬಹುಮಾನ ಮೊತ್ತವನ್ನು ಹಂಚಲಾಯಿತು.
ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನ ಮೊತ್ತವಾಗಿದ್ದ ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ ₹25,00,000 ಹಾಗೂ ರನ್ನರ್ಸ್ ಅಪ್ ತಂಡಕ್ಕೆ ₹15,00,000 ರಷ್ಟು ಬಹುಮಾನ ಘೋಷಿಸಲಾಗಿತ್ತು. ಆದರೆ ಜಾನ್ಸನ್ ಮತ್ತು ಪಾಂಚಜನ್ಯ ತಂಡಗಳ ನಡುವಿನ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ಉಂಟಾದ ವಿವಾದದಿಂದಾಗಿ ಟೂರ್ನಿಯೇ ರದ್ದಾಗಿ ಹೋಗಿತ್ತು.
ಈಗ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಾದ:ಖುಷಿ ಅಮರ್ ಪಾಂಚಜನ್ಯ,ಜಯಕರ್ನಾಟಕ ಬೆಂಗಳೂರು,ಇಝಾನ್ ಚೈತನ್ಯ ಫೈರ‍್ಸ್ ಎಚ್.ಎಂ ಏਕತಾ, ಮತ್ತುಫ್ರೆಂಡ್ಸ್ ಬೆಂಗಳೂರುತಲಾ ₹5,00,000 ರಷ್ಟು ಬಹುಮಾನ ಮೊತ್ತ ಪಡೆಯಲಾಯಿತು.
ವಿನ್ನರ್ ಮತ್ತು ರನ್ನರ್ಸ್ ತಂಡವನ್ನು ಟಾಸ್ ಮೂಲಕ ಆಯ್ಕೆ ಮಾಡಲಾಯಿತು. ಟಾಸ್ ಮೂಲಕ ಖುಷಿ ಅಮರ್ ಪಾಂಚಜನ್ಯ ತಂಡವು ಟ್ರೋಫಿ ವಿಜೇತರಾಗಿದ್ದು, ಜಯಕರ್ನಾಟಕ ತಂಡ ರನ್ನರ್ಸ್ ಟ್ರೋಫಿಯನ್ನು ಪಡೆದಿತು.
ಟೂರ್ನಿ ಆಯೋಜಕರಾದ ಶಕೀಲ್ ಹೊನ್ನಾಳ ಅವರು ಮಾತನಾಡಿ, ಈ ಬಾರಿ ಆಯೋಜಿಸಿದ ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳಿಗೆ ಮುಂಭರುವ ಟೂರ್ನಿಯಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರಾದ ಕೆ.ಪಿ. ಇಬ್ರಾಹಿಂ (ಕಟಪಾಡಿ), ಸಂಜೀವ್ ಕೋಟ್ಯಾನ್, ಮತ್ತು ಶಫೀ ಅಹಮ್ಮದ್ ಮೊದಲಾದವರು ಇದ್ದರು.



